ಎಐ ಮೂಲಕ ನಿಮ್ಮ ದಿನಚರಿ ತಯಾರಿಸಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
🧠 ಇಂದಿನ ಪ್ರಾಂಪ್ಟ್:
“ನಾನೊಬ್ಬ [ಉದ್ಯೋಗಿ]. ನನ್ನ ಕೆಲಸದ ಸಮಯ [ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ]. [ಕೆಲಸ, ಕುಟುಂಬ, ವ್ಯಾಯಾಮ, ಓದು ಮತ್ತು ವಿರಾಮಕ್ಕಾಗಿ] ಸಮಯ ಸಿಗುವಂತೆ ನನ್ನ ದಿನವನ್ನು ಯೋಜಿಸು. [ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ] ಪೂರ್ಣ ದಿನದ ವೇಳಾಪಟ್ಟಿ ಸಿದ್ಧಪಡಿಸು.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ಗಳಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
✨ ಅದೇ ಪ್ರಾಂಪ್ಟ್ ಅನ್ನು ನಾಲ್ಕೂ ಎಐಗಳಲ್ಲಿ ಹಾಕಿ, ಪ್ರತಿಯೊಂದೂ ಎಐ ಹೇಗೆ ವಿಭಿನ್ನವಾಗಿ ಉತ್ತರಿಸುತ್ತದೆ ಎಂಬುದನ್ನು ಗಮನಿಸಿ. ಸದ್ಯಕ್ಕೆ ಎಐ ಕನ್ನಡದಲ್ಲಿ ಚೆನ್ನಾಗಿ ವಿವರಿಸುವಷ್ಟು ನೈಪುಣ್ಯತೆಯಿಲ್ಲ. ತುಂಬಾ ತಪ್ಪುಗಳಿರುತ್ತವೆ. ಸರಿ ಮಾಡಿಕೊಂಡು ಓದಿ.
🔁 ಬ್ರಾಕೆಟ್ಗಳಲ್ಲಿರುವ [] ಭಾಗಗಳು “ಪ್ಲೇಸ್ಹೋಲ್ಡರ್ಗಳು.”
ನೀವು ಉದ್ಯಮಿ, ವ್ಯಾಪಾರಿ, ಶಿಕ್ಷಕ, ಪರ್ತಕರ್ತ, ವಿದ್ಯಾರ್ಥಿ ಅಥವಾ ಇನ್ನಾವುದೇ ಕೆಲಸದಲ್ಲಿ ನಿರತರಾಗಿದ್ದರೆ ಬ್ರಾಕೆಟ್ಗಳ ಜಾಗದಲ್ಲಿ ನಿಮ್ಮ ಜೀವನಕ್ಕೆ ಅನುಗುಣವಾದ ವಿವರವನ್ನು ಒದಗಿಸಿ. ಎಐ ನಿಮಗಾಗಿ ವೈಯಕ್ತಿಕ ದಿನಚರಿ ತಯಾರಿಸುತ್ತದೆ.
ಪ್ರಶ್ನೆಗಳನ್ನು ಟೈಪ್ ಮಾಡಬೇಕೆಂದೆನೂ ಇಲ್ಲ. ವಾಯ್ಸ್ ಮೂಲಕವೂ ಹೇಳಬಹುದು. ಅದನ್ನು ಎಐ ಅರ್ಥಮಾಡಿಕೊಳ್ಳುತ್ತದೆ.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
ಪ್ರತಿ ದಿನ ಇಮೇಲ್ ಮೂಲಕ ಪ್ರಾಂಪ್ಟ್ ಪಡೆಯಲು ಈಗಲೇ ಸಬ್ಸ್ಕ್ರೈಬ್ ಮಾಡಿ
AI ಕೇವಲ ಕಚೇರಿ ಕೆಲಸಕ್ಕೆ ಮಾತ್ರವಲ್ಲ - ಇದು ನೆಮ್ಮದಿಯ, ಸಮತೋಲಿತ ಬದುಕನ್ನು ಯೋಜಿಸಲೂ ನಮಗೆ
ಸಹಾಯ ಮಾಡುತ್ತದೆ!


