ಸುಲಭವಾಗಿ ತಿಂಗಳ ಖರ್ಚು-ವೆಚ್ಚ-ಉಳಿತಾಯಗಳ ಪ್ಲ್ಯಾನ್ ಮಾಡಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
🧠 ಇಂದಿನ ಪ್ರಾಂಪ್ಟ್:
“ನನ್ನ ಮಾಸಿಕ ಆದಾಯ [₹20000].
ನನ್ನ ತಿಂಗಳ ಉಳಿತಾಯ ಗುರಿ [₹2000].
ನನ್ನ ನಿಯಮಿತ ವೆಚ್ಚಗಳು ಇವುಗಳನ್ನು ಒಳಗೊಂಡಿವೆ: [ಬಾಡಿಗೆ-8000 / ಆಹಾರ / ಪ್ರಯಾಣ / ಕೌಟುಂಬಿಕ ವೆಚ್ಚಗಳು / ಇಎಂಐ / ಇತರೆ].
ಇದರ ಆಧಾರದ ಮೇಲೆ, ನನಗೆ ಸರಳವಾದ ಮಾಸಿಕ ಉಳಿತಾಯ ಯೋಜನೆಯನ್ನು ರಚಿಸು. ಸೂಕ್ತ ಸಲಹೆಗಳು ಇರಲಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ಗಳಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
✨ ಅದೇ ಪ್ರಾಂಪ್ಟ್ ಅನ್ನು ನಾಲ್ಕೂ ಎಐಗಳಲ್ಲಿ ಹಾಕಿ, ಪ್ರತಿಯೊಂದೂ ಎಐ ಹೇಗೆ ವಿಭಿನ್ನವಾಗಿ ಉತ್ತರಿಸುತ್ತದೆ ಎಂಬುದನ್ನು ಗಮನಿಸಿ. ಇದೊಂದು ಪ್ರಾಂಪ್ಟ್ನಿಂದ ಎಐ ನಿಮ್ಮ ಖರ್ಚು-ವೆಚ್ಚ-ಉಳಿತಾಯಗಳನ್ನು ಹೇಗೆ ಪ್ಲ್ಯಾನ್ ಮಾಡುತ್ತದೆ ಎಂದು ನೋಡಿದರೆ ಆಶ್ಚರ್ಯಪಡುತ್ತೀರಿ. ಅದರ ಸಲಹೆಗಳೂ ಉತ್ತಮವಾಗಿರುತ್ತವೆ. ಸದ್ಯಕ್ಕೆ ಎಐ ಮಾಡೆಲ್ಗಳಿಗೆ ಕನ್ನಡ ಅಷ್ಟು ಚೆನ್ನಾಗಿ ಬರುವುದಿಲ್ಲವಾದ್ದರಿಂದ ಕೆಲವು ತಪ್ಪುಗಳಿರಬಹುದು
🔁 ಬ್ರಾಕೆಟ್ಗಳಲ್ಲಿರುವ [] ಭಾಗಗಳು “ಪ್ಲೇಸ್ಹೋಲ್ಡರ್ಗಳು.”
ಬ್ರಾಕೆಟ್ನಲ್ಲಿರುವ ವಿವರವನ್ನು ನೀವು ಬದಲಾಯಿಸಬಹುದು. ಅಗತ್ಯವಿದ್ದರೆ ನಿಮ್ಮ ಅದಾಯ, ಉಳಿತಾಯದ ಗುರಿಗಳನ್ನು ಬದಲಾಯಿಸಿಕೊಳ್ಳಿ. ಬಾಡಿಗೆ ಸೇರಿದಂತೆ ನಿಮ್ಮ ಖರ್ಚು-ವೆಚ್ಚಗಳ ಅನುಸಾರ ಪಟ್ಟಿಯನ್ನು ಬದಲಾಯಿಸಿ. ಎಐ ನಿಮಗಾಗಿ ಉಳಿತಾಯ ಯೋಜನೆಯನ್ನು ಸಿದ್ಧಪಡಿಸುತ್ತದೆ. ಆ ಯೋಜನೆಯನ್ನು ಮೂರು ತಿಂಗಳು ಕಟ್ಟುನಿಟ್ಟಾಗಿ ಅನುಸರಿಸಿ. ಆಗ ಹಣಕಾಸು ಶಿಸ್ತಿನಲ್ಲಿ ನಿಮ್ಮಲ್ಲಾಗುವ ಬದಲಾವಣೆ ನಿಮಗೇ ಅಚ್ಚರಿ ತರುತ್ತದೆ. ಬಳಿಕ ಅದು ನಿಮ್ಮ ಬದುಕಿನ ಭಾಗವಾಗಲಿ.
ವಾಯ್ಸ್ ಮೂಲಕ ಎಐಗೆ ನೀವು ಪ್ರಶ್ನೆಗಳನ್ನು ಕೇಳಬಹುದು. ಪ್ರಯತ್ನಿಸಿ.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್ ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
ಸಣ್ಣ ಅಭ್ಯಾಸಗಳು — ದೊಡ್ಡ ಪರಿವರ್ತನೆಗಳಿಗೆ ದಾರಿ.
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence


