ಗಂಟೆಗಟ್ಟಲೆ ಓದುವುದು ಬಿಡಿ, ಈ ಪ್ರಾಂಪ್ಟ್ ಬಳಸಿ ನೋಡಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 8 | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ಎಐ ಮಾಡೆಲ್ಗಳ ಅತಿ ಮುಖ್ಯ ಉಪಯೋಗಗಳಲ್ಲಿ ದೊಡ್ಡ ದೊಡ್ಡ ದಾಖಲೆ, ವರದಿ, ಲೇಖನಗಳನ್ನು ಸರಳವಾಗಿ ಸಂಕ್ಷೇಪಗೊಳಿಸುವುದೂ ಒಂದು. ನಮ್ಮದೇ ಲೋಕದಲ್ಲಿ ನಾವು ಮುಳುಗಿರುವಾಗ ಪುಟ್ಟಗಟ್ಟಲೆ ವರದಿಗಳು, ಲೇಖನಗಳು ಅಥವಾ ಪುಸ್ತಕಗಳನ್ನು ಪೂರ್ತಿಯಾಗಿ ಓದಿ ಗ್ರಹಿಸಿಕೊಳ್ಳುವ ವ್ಯವದಾನ ಯಾರಿಗೂ ಇಲ್ಲ. ಈ ಕೆಲಸವನ್ನು ಎಐ ಬಳಸಿ ಸುಲಭಗೊಳಿಸಿಕೊಳ್ಳಬಹುದು. ಐದು ಪುಟ ಇರುವ ಒಂದು ಲೇಖನವನ್ನು, 200 ಪುಟ ಇರುವ ಒಂದು ಪುಸ್ತಕವನ್ನು, ನೂರಾರು ಪುಟಗಳಿರುವ ಒಂದು ವರದಿಯನ್ನು ನಮಗೆ ಬೇಕಾದಷ್ಟು ಪ್ರಮಾಣದಲ್ಲಿ ಸಮ್ಮರೈಸ್ ಮಾಡಲು ಕೇಳಬಹುದು. ಅದರಲ್ಲಿರುವ ಕಷ್ಟಕರ ಪರಿಕಲ್ಪನೆಗಳು, ವೈಜ್ಞಾನಿಕ ವಿಚಾರಗಳನ್ನು ಸರಳ ಭಾಷೆಯನ್ನು ವಿವರಿಸುವಂತೆ ಸೂಚಿಸಬಹುದು. ಎಷ್ಟು ಸಂಕ್ಷೇಪಿಸಬೇಕು, ಹೇಗೆ ಸಂಕ್ಷೇಪಿಸಬೇಕು ಎನ್ನುವುದನ್ನು ನಾವೇ ಸ್ಪಷ್ಟಪಡಿಸಬಹುದು. ಇಲ್ಲವಾದರೆ ಸುಮ್ಮನೆ ಸಂಕ್ಷೇಪಿಸು ಎಂದರೂ ಸಮ್ಮರಿ ನಮಗೆ ದೊರೆಯುತ್ತದೆ.
ನಮ್ಮ ಉದ್ದೇಶಕ್ಕೆ ಅನುಗುಣವಾಗಿ ನಿಗದಿತ ರೂಪದಲ್ಲಿ, ನಿಶ್ಚಿತವಾದ ಅಕ್ಷರಗಳಲ್ಲಿ ಸಂಕ್ಷೇಪಿಸಲು ಕೇಳಿಕೊಂಡರೆ ನಮ್ಮ ಕೆಲಸ ಸುಲಭವಾಗುತ್ತದೆ. ನಮ್ಮ ಪ್ರಾಂಪ್ಟಿಂಗ್ ಕೌಶಲ್ಯ ನೆರವಿಗೆ ಬರುವುದು ಇಲ್ಲಿಯೇ. ಇದನ್ನು ಗಮನದಲ್ಲಿರಿಸಿಕೊಂಡು ಯಾವುದೇ ದಾಖಲೆ, ಲೇಖನ ಅಥವಾ ಪಿಡಿಎಫ್ ರೂಪದ ಪುಸ್ತಕವನ್ನು ಸಾರಾಂಶೀಕರಿಸುವಂತೆ ನೆರವಾಗಲು ಇಂದಿನ ಪ್ರಾಂಪ್ಟ್ ನೀಡಲಾಗಿದೆ. ಸರಿಯಾಗಿ ಸಮ್ಮರೈಸ್ ಮಾಡುವುದನ್ನು ಕಲಿತರೆ ಗಂಟೆಗಟ್ಟಲೆ ಸಮಯವನ್ನ ಉಳಿಸಬಹುದು ಮಾತ್ರವಲ್ಲದೆ ಕ್ಲಿಷ್ಟಕರವಾದುದನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು.
ಯಾವುದಾದರೂ ವೆಬ್ಪುಟದಲ್ಲಿರುವ ವಿಚಾರವನ್ನು ಸಂಕ್ಷೇಪಿಸಲು ಬಯಸಿದರೆ Perplexity ಯ ಕಾಮೆಟ್ ಬ್ರೌಸರ್ ಬಳಸಬೇಕು. ಪುಟದ ಬಲಮೇಲ್ಭಾಗದಲ್ಲಿರುವ ‘Assistant’ ಎಂಬ ಬಟನ್ ಕ್ಲಿಕ್ ಮಾಡಿ ತೆರೆದಿರುವ ಪುಟದಲ್ಲಿ ಸಾರಾಂಶ ಕೇಳಬಹುದು. ಈಗ ಕಾಮೆಟ್ ಉಚಿತವಾಗಿ ಎಲ್ಲರಿಗೂ ಲಭ್ಯವಾಗಿದೆ.
🧠 ಇಂದಿನ ಪ್ರಾಂಪ್ಟ್:
ಅಟ್ಯಾಚ್ ಮಾಡಿರುವ ಫೈಲ್ನಲ್ಲಿರುವ ಅಥವಾ ಕೆಳಗೆ ಪೇಸ್ಟ್ ಮಾಡಿರುವ ವಿಷಯವನ್ನು ಸರಳವಾದ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯಲ್ಲಿ ಸಂಕ್ಷೇಪಿಸು. ಎಲ್ಲಾ ಪ್ರಮುಖ ಅಂಶಗಳು ಸಾರಾಂಶದಲ್ಲಿರಲಿ. ಪರಿಭಾಷೆಗಳು, ವೈಜ್ಞಾನಿಕ ವಿವರಣೆಗಳು ಅಥವಾ ಯಾವುದೇ ಸಂಕೀರ್ಣ ವಿಚಾರಗಳಿದ್ದರೆ ಅವುಗಳನ್ನು ಸರಳೀಕರಿಸಿ ಸ್ಪಷ್ಟ, ಸಂಕ್ಷಿಪ್ತ ಸ್ವರೂಪದಲ್ಲಿ ಪ್ರಸ್ತುತಪಡಿಸು. ಪ್ರಮುಖ ವಿಚಾರಗಳು, ವಾದಗಳು ಮತ್ತು ತೀರ್ಮಾನಗಳು ಸಾರಾಂಶದಲ್ಲಿರುವಂತೆ ನೋಡಿಕೊಳ್ಳುವುದು ಅಗತ್ಯ.
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ನಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
ಈ ಪ್ರಾಂಪ್ಟ್ಗೆ ಪ್ಲೇಸ್ಹೋಲ್ಡರ್ಗಳಿಲ್ಲ. ನಮ್ಮ ಅಗತ್ಯಕ್ಕೆ ತಕ್ಕಂತೆ ವಿವರಗಳನ್ನು ಬದಲಾಯಿಸಬಹುದು.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ನಿಮ್ಮ ಸೂಚನೆಯು ನಿಮ್ಮ ಫಲಿತಾಂಶವನ್ನು ರೂಪಿಸುತ್ತದೆ. ಹಾಗಾಗಿ ಉದ್ದೇಶ ಸ್ಪಷ್ಟವಾಗಿರಲಿ.”
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence


