ಎಐ ಬಳಸಿ ಬಯಸಿದ ಚಿತ್ರ ಬಿಡಿಸುವುದು ಹೇಗೆ?
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 6 | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ಇಂದು ಎಐ ಬಳಸಿ ಚಿತ್ರ ಬಿಡಿಸಲು ಅನುಕೂಲವಾಗುವಂತೆ ಪ್ರಾಂಪ್ಟ್ ನೀಡುತ್ತಿದ್ದೇನೆ. ಎಐ ಮಾಡೆಲ್ಗಳು ಬಂದ ಮೇಲೆ ನಮ್ಮ ಕಲ್ಪನೆಗೆ ಆಕಾಶವೂ ಮಿತಿಯಲ್ಲ ಎನ್ನುವಂತಾಗಿದೆ. ನಾವು ಹೇಗೆಲ್ಲಾ ಕಲ್ಪಿಸಿಕೊಳ್ಳಲು ಸಾಧ್ಯವೋ ಅಷ್ಟು ಬಗೆಯಲ್ಲಿ ಚಿತ್ರಗಳನ್ನು ರಚಿಸಬಹುದು. ಆದರೆ, ನಮ್ಮ ಪ್ರಾಂಪ್ಟ್ ನಮ್ಮ ಕಲ್ಪನೆಯನ್ನು ಬಿಂಬಿಸುವಂತಿರಬೇಕು ಅಷ್ಟೇ. ಇಂದಿನ ಚಿತ್ರದಲ್ಲಿ ನಾನು ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ಎಂ.ಜಿ ರಸ್ತೆಯಲ್ಲಿ ಸೈಕಲ್ ತುಳಿಸಿದ್ದೇನೆ. ಜೆಮಿನಿಯ ನ್ಯಾನೊ ಬನಾನಾ ಎಂಬ ಇಮೇಜ್ ಜನರೇಟರ್ ಬಳಸಿ ಈ ಚಿತ್ರ ರಚಿಸಿದ್ದೇನೆ. ಇದು ಜೆಮಿನಿ ಎಐನಲ್ಲಿ ಅಂತರ್ಗತವಾಗಿದೆ. ಕೆಳಗಿನ ಪ್ರಾಂಪ್ಟ್ ಬಳಸಿ ನೀವೂ ಪ್ರಯತ್ನಿಸಿ.
🧠 ಇಂದಿನ ಪ್ರಾಂಪ್ಟ್:
“[ತಲೆಗೆ ಕೌ ಬಾಯ್ ಟೋಪಿ ಧರಿಸಿರುವ] [ಸೈಬೀರಿಯನ್ ಹಸ್ಕಿ] ತಳಿಯ ನಾಯಿಯೊಂದು [ಸೈಕಲ್ ತುಳಿಯುತ್ತಾ] ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಹೋಗುತ್ತಿರುವ [ತೈಲವರ್ಣಚಿತ್ರ] ರಚಿಸು.
· ಡಬಲ್ರೋಡ್ ಇರುವ ಎಂ.ಜಿ ರಸ್ತೆಯಲ್ಲಿ ಒಂದು ಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸುತ್ತಿರಲಿ.
· ನಾಯಿ ನಡುರಸ್ತೆಯಲ್ಲಿ ಸಾಗುತ್ತಿದ್ದು, ಎಂ.ಜಿ ರಸ್ತೆಯು ಉದ್ದಕ್ಕೂ ಚಿತ್ರದಲ್ಲಿ ಕಾಣುತ್ತಿರಲಿ.
· ಜನರು, ವಾಹನಗಳು ರಸ್ತೆಯಲ್ಲಿ ತುಂಬಿರಲಿ. ರಸ್ತೆಯ ಪಕ್ಕದಲ್ಲೇ ಇರುವ ಟ್ರ್ಯಾಕ್ನಲ್ಲಿ ಮೆಟ್ರೊ ಚಲಿಸುತ್ತಿರಲಿ.
· ಚಿತ್ರ ಇಂದಿನ ಎಂ.ಜಿ ರಸ್ತೆಯ ನೈಜ ಚಿತ್ರಣವನ್ನು ಬಿಂಬಿಸುವಂತಿರಲಿ.
· ಬೆಂಗಳೂರಿನ ಸ್ಥಳೀಯತೆ ಚಿತ್ರದಲ್ಲಿ ಕಾಣುವಂತಿರಲಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ಗಳಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
✨ ಅದೇ ಪ್ರಾಂಪ್ಟ್ ಅನ್ನು ನಾಲ್ಕೂ ಎಐಗಳಲ್ಲಿ ಹಾಕಿ, ಪ್ರತಿಯೊಂದೂ ಎಐ ಹೇಗೆ ವಿಭಿನ್ನವಾಗಿ ಚಿತ್ರ ಬಿಡಿಸುತ್ತವೆ ಎನ್ನವುದನ್ನು ನೋಡಬಹುದು.
🔁 ಬ್ರಾಕೆಟ್ಗಳಲ್ಲಿರುವ [] ಭಾಗಗಳು “ಪ್ಲೇಸ್ಹೋಲ್ಡರ್ಗಳು.”
ಬ್ರಾಕೆಟ್ಗಳಿರುವ ಜಾಗದಲ್ಲಿ ನಿಮ್ಮ ಕಲ್ಪನೆಗೆ ತಕ್ಕಂತೆ ವಿವರಗಳನ್ನು ಬದಲಾಯಿಸಬಹುದು. ಅದರಲ್ಲಿ ಮುಖ್ಯವಾದದ್ದು ಚಿತ್ರದ ಶೈಲಿಗೆ ಸಂಬಂಧಿಸಿದ ವಿಚಾರ, ಎಐ ಬಳಸಿ ಚಿತ್ರಗಳನ್ನು ರಚಿಸುವಾಗ ಕಡ್ಡಾಯವಾಗಿ ಅದರ ಶೈಲಿ ಯಾವುದು ಎನ್ನುವುದನ್ನು ತಪ್ಪದೇ ನಮೂದಿಸಬೇಕು. ಉದಾ: ಆಯಿಲ್ ಪೇಂಟಿಂಗ್, ಜಲವರ್ಣ, ಪೆನ್ಸಿಲ್ ಸ್ಕೆಚ್, ಅನಿಮೆ, ಕಾರ್ಟೂನ್, ಕಾಮಿಕ್, ಪಿಕ್ಸೆಲ್ ಆರ್ಟ್, ಅಮೂರ್ತ ಚಿತ್ರ, 3D ರೆಂಡರ್, CGI, ಸೈಬರ್ಪಂಕ್, ಸೈ-ಫೈ, ಫ್ಯಾಂಟಸಿ, ವೆಕ್ಟರ್ ಆರ್ಟ್, ಡಿಜಿಟಲ್ ಪೇಂಟಿಂಗ್, ಫೋಟೋರಿಯಲಿಸ್ಟಿಕ್, ಕಪ್ಪು ಮತ್ತು ಬಿಳಿ ಇತ್ಯಾದಿ. ಇನ್ನೂ ಹತ್ತಾರು ಬಗೆಗಳಿವೆ. ಬಹುತೇಕ ನಾವು ಬಳಸುವ ಎಲ್ಲಾ ಶೈಲಿಗಳು ಇಲ್ಲಿವೆ. ನಮಗೆ ಬೇಕಿರುವ ಚಿತ್ರ ನೈಜವಾಗಿ ಫೋಟೋ ರೀತಿ ಬರಬೇಕೆಂದರೆ “ಫೋಟೋರಿಯಲಿಸ್ಟಿಕ್” ಶೈಲಿ ಬಳಸಬೇಕು.
ಎಐ ಮೂಲಕ ನಮಗೆ ಬೇಕಾದ ಚಿತ್ರ ರಚಿಸುವುದು ಕಷ್ಟದ ಕೆಲಸ. ಅವು ಎಷ್ಟೋ ಬಾರಿ ನಮ್ಮ ಮಾತು ಕೇಳುವುದೇ ಇಲ್ಲ. ನಾವು ಹೇಳುವುದೇ ಒಂದು ಅವು ರಚಿಸುವುದೇ ಇನ್ನೊಂದು ಎನ್ನುವಂತಾಗುತ್ತದೆ. ಆದರೂ ಮತ್ತೆ ಮತ್ತೆ ಫಾಲೋ ಅಪ್ ಪ್ರಾಂಪ್ಟ್ಗಳನ್ನು ಒದಗಿಸುತ್ತಾ ಬೇಕಾದ ಚಿತ್ರವನ್ನು ಪಡೆಯಬೇಕು.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ನಿಮ್ಮ ಕಲ್ಪನೆ ಬಾಗಿಲಾದರೆ ಅದನ್ನು ತೆರೆಯುವ ಬೀಗವೇ ಪ್ರಾಂಪ್ಟ್”
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence



