ಒಂದೇ ದಿನ ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ಆದಾಯ 101 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇದು ಇಡೀ ವಿಶ್ವದಲ್ಲಿ ಈವರೆಗೆ ಒಂದು ದಿನದಲ್ಲಿ ಏರಿಕೆಯಾದ ಅತಿ ಹೆಚ್ಚು ವೈಯಕ್ತಿಕ ಆದಾಯ. ಸೆಪ್ಟೆಂಬರ್ 10, 2025 ರಂದು ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಲ್ಯಾರಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದರು. ಅವರ ನಿವ್ವಳ ಮೌಲ್ಯವು $100 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಏರಿಕೆಯಾಗಿದೆ. ಒರಾಕಲ್‌ನ ಷೇರು ಒಂದೇ ದಿನದಲ್ಲಿ 43% ರಷ್ಟು ಏರಿಕೆಯಾಗಿರುವ ಪರಿಣಾಮ ಲ್ಯಾರಿ ಅವರ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ. ಒರಾಕಲ್‌ನ ತ್ರೈಮಾಸಿಕ ಫಲಿತಾಂಶ ಹಾಗೂ ಎಐ ಮತ್ತು ಕ್ಲೌಡ್ ಸೇವೆಗಳಲ್ಲಿ ಅಭೂತಪೂರ್ವ ಯಶಸ್ಸಿನ ಕಾರಣದಿಂದ ಒರಾಕಲ್ ಷೇರು ಆಕಾಶಕ್ಕೆ ಜಿಗಿದಿದೆ. ಒಪನ್ ಎಐ, ಎನ್‌ವಿಡಿಯಾ ಎಂದ ದೈತ್ಯ ಎಐ ಕಂಪನಿಗಳೂ ಸೇರಿದಂತೆ ಜಗತ್ತಿನ ಟಾಪ್ ಕಂಪನಿಗಳಿಗೆ ಒರಾಕಲ್ ಕ್ಲೌಡ್ ಮತ್ತಿತರ ಸೇವೆ ನೀಡುತ್ತಿದೆ. ಅಮೆರಿಕದಲ್ಲಿ ಆರಂಭಿಸಿರುವ 500 ಬಿಲಿಯನ್ ಡಾಲರ್ ಮೊತ್ತದ ಜಗತ್ತಿನ ಅತಿದೊಡ್ಡ ಎಐ ಯೋಜನೆ 'ಸ್ಟಾರ್‌ಗೇಟ್'ನಲ್ಲಿ ಒರಾಕಲ್‌ನದೂ ಪಾಲುದಾರಿಕೆ ಇದೆ.
Playback speed
×
Share post
Share post at current time
Share from 0:00
0:00
/
Generate transcript
A transcript unlocks clips, previews, and editing.
AI ಮಾಯೆ, ಒಂದೇ ದಿನ 101 ಬಿಲಿಡನ್ ಡಾಲರ್ ಆದಾಯ, ಜಗತ್ತಿನ ಅತಿ ಶ್ರೀಮಂತನಾದ ಒರಾಕಲ್ ಸಿಇಒ ಲ್ಯಾರಿ ಎಲಿಸನ್!
Sep 12, 2025




