ನಿಮ್ಮ ಕಲ್ಪನೆಗೆ ಸ್ಪಷ್ಟ ಬಿಸಿನೆಸ್ ರೂಪ ನೀಡುವುದು ಹೇಗೆ?
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 9: ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ತಮ್ಮದೇ ಸ್ವಂತ ಉದ್ಯಮ ಕಟ್ಟುವ, ವ್ಯವಹಾರ ಆರಂಭಿಸುವ ಕನಸು ಎಲ್ಲರಲ್ಲೂ ಇರುತ್ತದೆ. ಅದ್ಬುತ ಬಿಸಿನೆಸ್ ಐಡಿಯಾ ಕೂಡ ತಲೆಯಲ್ಲಿ ರಾತ್ರಿ-ಹಗಲು ಕೊರೆಯುತ್ತಿರುತ್ತದೆ. ಆದರೆ, ಯಾರೊಂದಿಗೆ ಚರ್ಚಿಸಬೇಕು ಎಂಬ ಗೊಂದಲ ಕಾಡುತ್ತಿರುತ್ತದೆ. ನಮ್ಮ ವಿಚಾರ ಕೇಳಿ ಯಾರಾದರೂ ನಕ್ಕುಬಿಟ್ಟಾರು ಎಂದು ಮರ್ಯಾದೆಗೆ ಅಂಜುವವರು ನಾವು. ಅದಕ್ಕೆ ಯಾರಿಗೂ ಹೇಳಿಕೊಳ್ಳಲಾಗದೆ ಒಳಗೊಳಗೇ ವರ್ಷಾನುಗಟ್ಟಲೆ ನಮ್ಮ ತಲೆಯಲ್ಲಿರುವ ಬಿಸಿನೆಸ್ ಐಡಿಯಾ ಮನದಲ್ಲೇ ಬೆಳೆದು ದೊಡ್ಡ ಉದ್ಯಮವೇ ಆಗಿರುತ್ತದೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಮಾರ್ಗದರ್ಶನ, ಬಂಡವಾಳ, ಸೂಕ್ತ ನೆರವು ದೊರೆಯುವುದೇ ಇಲ್ಲ. ಹೀಗಾಗಿ ತಲೆಯಲ್ಲಿರುವ ಬಿಸಿನೆಸ್ ಐಡಿಯಾ ಬೆಳಕು ಕಾಣದೆ ತಲೆಯಲ್ಲೇ ಉಳಿದುಹೋಗುತ್ತದೆ. ಹೀಗೆ ಅದೆಷ್ಟೋ ಕ್ರಾಂತಿಕಾರಿ ಐಡಿಯಾಗಳು ಸತ್ತು ಹೋಗುತ್ತವೆ. ಕೆಲ ವರ್ಷಗಳ ಬಳಿಕ ನಾವು ಯೋಚಿಸಿದ ವಿಚಾರವನ್ನೇ ವ್ಯವಹಾರದ ರೂಪಕ್ಕೆ ತಿರುಗಿಸಿ ಸಕ್ಸೆಸ್ ಆಗಿರುವುದನ್ನು ಕಂಡಾಗ ಹೊಟ್ಟೆಗೆ ಬೆಂಕಿ ಬೀಳುತ್ತದೆ.
ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಒಂದು ಐಡಿಯಾ ಇದೆ ಹೇಳಿಕೊಳ್ಳಲು ಯಾರೂ ಸಿಗುತ್ತಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ಹೇಳಿಕೊಂಡರೆ ಏನಂದುಕೊಳ್ಳುತ್ತಾರೋ ಎಂದು ಮುಜುಗರಪಟ್ಟುಕೊಳ್ಳುವ ಅಗತ್ಯವೂ ಇಲ್ಲ. ಈಗ ಎಲ್ಲರ ಜೊತೆಯಲ್ಲು ಮಾತನಾಡಲು ಎಐ ಇದೆ. ಒಬ್ಬ ತಜ್ಞ ವ್ಯಕ್ತಿಯ ಜೊತೆ ಮಾತನಾಡುವುದಕ್ಕಿಂತಲೂ ಚೆನ್ನಾಗಿ, ಅರ್ಥಪೂರ್ಣವಾಗಿ ಎಐ ಜೊತೆ ಬಿಸಿನೆಸ್ ಐಡಿಯಾಗಳನ್ನು ಚರ್ಚಿಸಬಹುದು. ಸೂಕ್ತ ಸಲಹೆಗಳನ್ನು ಕೇಳಬಹುದು. ನಿಮ್ಮೊಡನೆ ಸಾವಧಾನವಾಗಿ ಚರ್ಚಿಸುವ ಎಐ ಪ್ರತಿಯೊಂದನ್ನೂ ವಿವರಿಸುತ್ತಾ, ನಿಮಗೆ ಬೆಂಬಲದ ಮಾತುಗಳನ್ನಾಡುತ್ತಾ, ಬಿಸಿನೆಸ್ ಐಡಿಯಾದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸುತ್ತಾ, ಉತ್ತಮ ಅಂಶಗಳನ್ನು ಹೊಗಳುತ್ತಾ ಚರ್ಚಿಸುತ್ತದೆ. ಅಂದಾಜು ಬಂಡವಾಳವನ್ನೂ ಹೇಳಿ ನಮ್ಮ ಕಲ್ಪನೆಗೆ ಜೀವತುಂಬಲು ಮಾಡಬೇಕಾದ ಕೆಲಸಗಳನ್ನು ಹಂತ ಹಂತವಾಗಿ ವಿವರಿಸುತ್ತದೆ. ಇದನ್ನು ಬ್ರೈನ್ಸ್ಟಾರ್ಮಿಂಗ್ ಎಂದು ಕರೆಯುತ್ತಾರೆ. ಎಐ ಈ ಕೆಲಸ ಮಾಡಬೇಕಾದರೆ ಅದಕ್ಕೆ ಸೂಕ್ತ ಪ್ರಾಂಪ್ಟ್ ಅತ್ಯಗತ್ಯ. ಇದನ್ನು ಗಮನದಲ್ಲಿರಿಸಿಕೊಂಡು ಇಂದಿನ ಪ್ರಾಂಪ್ಟ್ ನೀಡಲಾಗಿದೆ. ಈ ಪ್ರಾಂಪ್ಟ್ ಅನ್ನು ಕಾಪಿ ಮಾಡಿ ಯಾವುದೇ ಎಐ ಮಾಡೆಲ್ ಒಳಗೆ ಪೇಸ್ಟ್ ಮಾಡಿ ಅತ್ಯಂತ ಅನುಭವಿ ಮತ್ತು ವರ್ಲ್ಡ್ಕ್ಲಾಸ್ ಬಿಸಿನೆಸ್ ಕೋಚ್ ಜೊತೆಗೆ ನಿಮ್ಮ ಬಿಸಿನೆಸ್ ಸಂವಾದನ್ನು ಆರಂಭಿಸಿಬಹುದು. ಸ್ವಲ್ಪ ಬಿಡುವು ಮಾಡಿಕೊಂಡು, ಗಲಾಟೆ ಇಲ್ಲದ ಜಾಗದಲ್ಲಿ ಕುಳಿತು ಕೆಲಸ ಆರಂಭಿಸಿ. ಒಟ್ಟಾರೆ ಚರ್ಚೆ, ಅಂತಿಮ ಫಲಿತವನ್ನು ಕಂಡು ನಿಮಗೇ ಅಚ್ಚರಿಯಾಗುತ್ತದೆ. ನಿಮ್ಮ ಬಿಸಿನೆಸ್ ಚರ್ಚೆಗೆ ಆಲ್ ದಿ ಬೆಸ್!
🧠 ಇಂದಿನ ಪ್ರಾಂಪ್ಟ್:
“ನಾನೊಬ್ಬ ಸಾಮಾನ್ಯ ವ್ಯಕ್ತಿ. ವ್ಯವಹಾರ ಅಥವಾ ಉದ್ಯಮದ ನನಗಿಲ್ಲ. ಆದರೆ ನನ್ನೊಳಗೆ ಒಂದು ವ್ಯವಹಾರದ ಕಲ್ಪನೆ ಇದೆ ಮತ್ತು ಅದನ್ನು ಗಂಭೀರವಾಗಿ ಚರ್ಚಿಸಿ ರೂಪಿಸಿಕೊಳ್ಳಲು ಬಯಸುತ್ತೇನೆ.
· ನೀನು ನನ್ನ ಒಬ್ಬ ವ್ಯವಹಾರ ತಜ್ಞನಾಗಿದ್ದು, ಸ್ನೇಹಪರವಾಗಿರು ಆರಂಭಿಕ ಮಾರ್ಗದರ್ಶಕನಾಗಿರು.
· ಆರಂಭಿಕರೊಂದಿಗೆ ಸಹನಶೀಲವಾಗಿ ಮಾತನಾಡುವ, ಪ್ರಶ್ನೆಗಳಿಂದ ಚಿಂತನೆಗೆ ಪ್ರೇರೇಪಿಸುವಂತೆ ವರ್ತಿಸು.
· ನೀನು ಸರಳ ಭಾಷೆಯಲ್ಲಿ ಹಂತ ಹಂತವಾಗಿ ವಿವರಿಸುವ ಮಾರ್ಗದರ್ಶಿಯ ಪಾತ್ರ ನಿನ್ನದಾಗಬೇಕೆಂದು ಬಯಸುತ್ತೇನೆ.
ನಮ್ಮ ಸಂವಾದ ಹೀಗಿರಲಿ:
• ಒಂದೇ ಸಮಯದಲ್ಲಿ ಒಂದು ಪ್ರಶ್ನೆ ಕೇಳು
• ನನ್ನ ಉತ್ತರದ ಆಧಾರದ ಮೇಲೆ ಮುಂದಿನ ಹಂತ ಸೂಚಿಸು
• ಸಲಹೆಗಳು, ಉದಾಹರಣೆಗಳು ಮತ್ತು ಮಾರ್ಗದರ್ಶನ ಕೊಡುತ್ತಾ ಕಲ್ಪನೆಯನ್ನು ವಿಸ್ತರಿಸುತ್ತಾ ಹೋಗು
ನಾವು ಒಟ್ಟಿಗೆ ಈ ಕಲ್ಪನೆಯನ್ನು ಒಂದು ಸ್ಪಷ್ಟ ಮತ್ತು ಕಾರ್ಯಗತಗೊಳಿಸಬಹುದಾದ ಬಿಸಿನೆಸ್ ಐಡಿಯಾ ಆಗಿ ಅಭಿವೃದ್ಧಿಪಡಿಸೋಣ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ನಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
ಈ ಪ್ರಾಂಪ್ಟ್ ಹಾಕಿದ ಕೂಡಲೇ ನಿಮ್ಮ ಬಿಸಿನೆಸ್ ಐಡಿಯಾವನ್ನು ಅರ್ಥಮಾಡಿಕೊಳ್ಳಲು ಎಐ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ಅವೆಲ್ಲಕ್ಕೂ ಸರಿಯಾಗಿ ಉತ್ತರಿಸಿದರೆ ನಿಮ್ಮ ಸಂವಾದ ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ಪ್ರತಿ ದೊಡ್ಡ ವ್ಯವಹಾರವೂ ಒಂದು ಸಣ್ಣ ಕಲ್ಪನೆಯಂದಲೇ ಹುಟ್ಟುತ್ತದೆ.”
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence | #Brainstroming | #BusinessIdea


