ಎಐ ಬಳಸಿ ಹೊಸ ಅಭ್ಯಾಸ ಕಲಿಯುವುದು ಹೇಗೆ?
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
🧠 ಇಂದಿನ ಪ್ರಾಂಪ್ಟ್:
“ನಾನು ಪ್ರತಿದಿನ [20] ನಿಮಿಷಗಳ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ನನಗೆ [15] ದಿನಗಳ [ಓದುವ ಅಭ್ಯಾಸ] ಬೆಳೆಸುವ ಒಂದು ಸರಳ ಯೋಜನೆಯನ್ನು ರೂಪಿಸು. [ಸಾಹಿತ್ಯ] ವಿಷಯದ ಮೇಲೆ ದಿನಕ್ಕೆ ಒಂದು ಲೇಖನ, ಒಂದು ಕಥೆ ಅಥವಾ ಒಂದು ವಿಷಯವನ್ನು ಸೂಚಿಸು. ಆನ್ಲೈನ್ನಲ್ಲೇ ಓದಲು ಸೂಕ್ತ ಲಿಂಕ್ ಇರಲಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ಗಳಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
✨ ಅದೇ ಪ್ರಾಂಪ್ಟ್ ಅನ್ನು ನಾಲ್ಕೂ ಎಐಗಳಲ್ಲಿ ಹಾಕಿ, ಪ್ರತಿಯೊಂದೂ ಎಐ ಹೇಗೆ ವಿಭಿನ್ನವಾಗಿ ಉತ್ತರಿಸುತ್ತದೆ ಎಂಬುದನ್ನು ಗಮನಿಸಿ. ಸದ್ಯಕ್ಕೆ ಎಐ ಕನ್ನಡದಲ್ಲಿ ಚೆನ್ನಾಗಿ ವಿವರಿಸುವಷ್ಟು ನೈಪುಣ್ಯತೆ ಪಡೆದಿಲ್ಲ. ತುಂಬಾ ತಪ್ಪುಗಳಿರುತ್ತವೆ. ಆದರೆ ಅದು ಹೇಳುವ ವಿಚಾರ ನಮಗೆ ಅರ್ಥವಾಗುತ್ತದೆ.
🔁 ಬ್ರಾಕೆಟ್ಗಳಲ್ಲಿರುವ [] ಭಾಗಗಳು “ಪ್ಲೇಸ್ಹೋಲ್ಡರ್ಗಳು.”
ಬ್ರಾಕೆಟ್ನಲ್ಲಿರುವ ವಿವರವನ್ನು ನೀವು ಬದಲಾಯಿಸಬಹುದು. 20 ನಿಮಿಷಗಳ ಬದಲು 30/60 ನಿಮಿಷ, ಓದುವ ಅಭ್ಯಾಸದ ಬದಲು ಯೋಗ ಮಾಡುವ ಅಭ್ಯಾಸ ಇತ್ಯಾದಿಗೆ ಬದಲಾಯಿಸಬಹುದು. ಓದುವುದೇ ನಿಮ್ಮ ಆಸಕ್ತಿಯಾದರೆ ಸಾಹಿತ್ಯದ ಬದಲು ನಿಮ್ಮ ಆಸಕ್ತಿಯ ವಿಷಯವನ್ನು ಸೇರಿಸಬಹುದು. ಅದಕ್ಕೆ ತಕ್ಕಂತೆ ಎಐ 15 ದಿನಗಳಿಗೆ ಯೋಜನೆ ಸಿದ್ಧಪಡಿಸುತ್ತದೆ.
ಪ್ರಶ್ನೆಗಳನ್ನು ಟೈಪ್ ಮಾಡಬೇಕೆಂದೆನೂ ಇಲ್ಲ. ವಾಯ್ಸ್ ಮೂಲಕವೂ ಹೇಳಬಹುದು. ಅದನ್ನು ಎಐ ಅರ್ಥಮಾಡಿಕೊಳ್ಳುತ್ತದೆ.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್ ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
ಸಣ್ಣ ಅಭ್ಯಾಸಗಳು — ದೊಡ್ಡ ಪರಿವರ್ತನೆಗಳಿಗೆ ದಾರಿ.
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence


