ಈ ಪ್ರಾಂಪ್ಟ್ ಬಳಸಿ ನಿಮ್ಮ ಚಿತ್ರವನ್ನು ಘಿಬ್ಲಿ ಶೈಲಿಗೆ ಪರಿವರ್ತಿಸಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 7 | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ಸಾಮಾನ್ಯ ಚಿತ್ರಗಳನ್ನು ಸ್ಟುಡಿಯೊ ಘಿಬ್ಲಿ ಶೈಲಿಗೆ ಪರವರ್ತಿಸುವ ಚಾಟ್ಜಿಪಿಯ ಫೀಚರ್ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿತ್ತು. ಜಗತ್ತಿನೆಲ್ಲೆಡೆ ಕೋಟ್ಯಂತರ ಜನರು ತಮ್ಮ ಮತ್ತು ತಮ್ಮ ಕುಟುಂಬದ ಚಿತ್ರಗಳನ್ನು ಘಿಬ್ಲಿ ಶೈಲಿಗೆ ಪರಿವರ್ತಿಸಿಕೊಂಡು ಸಂಭ್ರಮಿಸಿದರು. ಆ ಶೈಲಿಯ ಚಿತ್ರವನ್ನು ನೀವೂ ರಚಿಸಲು ಅನುಕೂಲವಾಗುವಂತೆ ಇಂದು ಪ್ರಾಂಪ್ಟ್ ಒದಗಿಸಲಾಗಿದೆ. ಈ ಪ್ರಾಂಪ್ಟ್ ಬಳಸಿ ತಮ್ಮ ಇಷ್ಟದ ಘಿಬ್ಲಿ ಆನಿಮೇಶನ್ ಚಿತ್ರವನ್ನು ರಚಿಸಬಹುದು. ಹಿನ್ನೆಲೆಯ ವಿವರವನ್ನು ಬದಲಾಯಿಸಿಕೊಂಡು ಬೇಕಾದ ಹಿನ್ನೆಲೆ ತುಂಬಬಹುದು. ಇದು ಚಾಟ್ಜಿಪಿಟಿಯ ವಿಶಿಷ್ಟ ಫೀಚರ್ ಆಗಿರುವುದರಿಂದ ಇಂತಹ ಚಿತ್ರವನ್ನು ಚಾಟ್ಜಿಪಿಟಿಯಲ್ಲೇ ಬಳಸಬೇಕು.
🧠 ಇಂದಿನ ಪ್ರಾಂಪ್ಟ್:
“ಅಟ್ಯಾಚ್ ಮಾಡಿರುವ ಫೋಟೋವನ್ನು ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರಣವಾಗಿ ಪರಿವರ್ತಿಸು. ಚಿತ್ರದಲ್ಲಿರುವ ಹಿನ್ನೆಲೆಯಲ್ಲಿ ಹಾಗೆಯೇ ಉಳಿಸಿಕೊ. ಸ್ಟುಡಿಯೋ ಘಿಬ್ಲಿ ಆ್ಯನಿಮೇಷನ್ನ ವಿಶಿಷ್ಟವಾದ ಆಕರ್ಷಕ, ಕೈಯಿಂದ ಚಿತ್ರಿಸಿದ ಶೈಲಿ ಗಾಢವಾಗಿರಲಿ. ಆದಷ್ಟೂ ಚಿತ್ರದಲ್ಲಿರುವ ವ್ಯಕ್ತಿಗಳ ಮುಖಚರ್ಯೆ ಘಿಬ್ಲಿ ಶೈಲಿಯಲ್ಲೂ ಬಿಂಬಿಸಲಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ನಲ್ಲಿ ಬಳಸಿ:
ChatGPT → https://chatgpt.com
ಈ ಪ್ರಾಂಪ್ಟ್ಗೆ ಪ್ಲೇಸ್ಹೋಲ್ಡರ್ಗಳಿಲ್ಲ. ಹಿನ್ನೆಲೆಯ ಬದಲಾಯಿಸುವ ವಿವರವನ್ನು ತುಂಬಬಹುದು.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ಸಣ್ಣ ಸಣ್ಣ ಸಂತೋಷಗಳನ್ನು ಒಟ್ಟಿಗೇ ಹಂಚಿಕೊಂಡು ಸಂಭ್ರಮಿಸುವುದೇ ಪ್ರೇಮ”
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence


