ಇಂದಿನ ಪ್ರಾಂಪ್ಟ್: ಎಐ ಬಗ್ಗೆ ವಿವರಿಸಲು ಎಐ ಅನ್ನೇ ಕೇಳಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ
🧠 ಇಂದಿನ ಪ್ರಾಂಪ್ಟ್:
“ನನಗೆ ಎಐ ಬಗ್ಗೆ ಏನೂ ಗೊತ್ತಿಲ್ಲ. ಆದ್ದರಿಂದ, [ಎಐ ಕುರಿತು] ಮಕ್ಕಳಿಗೆ ಬಿಡಿಸಿ ಹೇಳುವಂತೆ ಸರಳವಾಗಿ ವಿವರಿಸು. ಹೆಚ್ಚು ತಿಳಿಯುವ ಕುತೂಹಲಕ್ಕಾಗಿ ಸ್ವಯಂಪ್ರೇರಿತವಾಗಿ ಹೊಸ ವಿಷಯಗಳನ್ನು ತೋರಿಸು.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ಗಳಲ್ಲಿ ಬಳಸಿ:
ChatGPT →
https://chatgpt.com
Gemini → https://gemini.google.com/app
Perplexity →
https://www.perplexity.ai
Copilot →
https://copilot.microsoft.com
✨ ಅದೇ ಪ್ರಾಂಪ್ಟ್ ಅನ್ನು ನಾಲ್ಕೂ ಎಐಗಳಲ್ಲಿ ಹಾಕಿ, ಪ್ರತಿಯೊಂದೂ ಎಐ ಹೇಗೆ ವಿಭಿನ್ನವಾಗಿ ಉತ್ತರಿಸುತ್ತದೆ ಎಂಬುದನ್ನು ಗಮನಿಸಿ. ಸದ್ಯಕ್ಕೆ ಎಐ ಕನ್ನಡದಲ್ಲಿ ಚೆನ್ನಾಗಿ ವಿವರಿಸುವಷ್ಟು ನೈಪುಣ್ಯತೆ ಪಡೆದಿಲ್ಲ. ತುಂಬಾ ತಪ್ಪುಗಳಿರುತ್ತವೆ. ಆದರೆ ಅದು ಹೇಳುವ ವಿಚಾರ ನಮಗೆ ಅರ್ಥವಾಗುತ್ತದೆ.
🔁 ಬ್ರಾಕೆಟ್ಗಳಲ್ಲಿರುವ [] ಭಾಗಗಳು “ಪ್ಲೇಸ್ಹೋಲ್ಡರ್ಗಳು.”
ಈ ಪ್ರಾಂಪ್ಟ್ ಅನ್ನು ಪ್ರಯತ್ನಿಸಿದ ಬಳಿಕ ಬ್ರಾಕೆಟ್ನಲ್ಲಿ [] ಕೊಟ್ಟಿರುವ ವಿಷಯದ ಬದಲು ‘ಇಂಟರ್ನೆಟ್ ಕುರಿತು’, ‘ಬ್ಲಾಕ್ಚೈನ್ ತಂತ್ರಜ್ಞಾನದ ಕುರಿತು’, ‘ವೆಬ್ 3.0 ಕುರಿತು’, ಇತ್ಯಾದಿ ಬೇರೆ ಯಾವುದೇ ವಿಷಯವನ್ನು ಬದಲಾಯಿಸಿ ಎಐಗೆ ಕೇಳಿ ನೋಡಿ.
ನೆನಪಿಡಿ! ನೀವು ನಿಮ್ಮ ಪ್ರಶ್ನೆಗಳನ್ನು ಟೈಪ್ ಮಾಡಬೇಕೆಂದೆನೂ ಇಲ್ಲ. ವಾಯ್ಸ್ ಅಥವಾ ಧ್ವನಿ ಮೂಲಕವೂ ಹೇಳಬಹುದು. ಅದನ್ನು ಎಐ ಅರ್ಥಮಾಡಿಕೊಳ್ಳುತ್ತದೆ.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್ ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
“AI ಜೊತೆ ಮಾತನಾಡಲು ಇಂಗ್ಲಿಷ್ ಬೇಕಿಲ್ಲ. ನೀವು ಹೇಗೆ ಮಾತನಾಡುತ್ತೀರೋ ಅದೇ ರೀತಿ ಕನ್ನಡದಲ್ಲೇ ಬರೆಯಿರಿ. ಸ್ಪಷ್ಟವಾಗಿದ್ದರೆ ಸಾಕು.”


