ಕುಗ್ಗಿದ ಮನಸಿಗೆ 10 ನಿಮಿಷಗಳಲ್ಲಿ ಮುಲಾಮು ಹಚ್ಚಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 5 | ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ಮನಸ್ಸು ಮರ್ಕಟ ಇದ್ದಂತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದು ಯಾವಾಗ ಹೇಗಿರುತ್ತದೆ ಎಂಬುದು ಸ್ವತಃ ಮನಸ್ಸಿನ ಮಾಲೀಕನಿಗೂ ತಿಳಿಯುವುದಿಲ್ಲ. ಸಂತೋಷದಲ್ಲಿ ತೇಲುವ ಮನಸ್ಸು ಮರುಕ್ಷಣದಲ್ಲೇ ದುಗುಡಕ್ಕೆ ದೂಡಬಹುದು; ಬದುಕು ಸಾಕೆನಿಸಬಹುದು; ಆಕಾಶವೇ ಕಳಚಿ ಬಿದ್ದಂತೆ ಭಾಸವಾಗಬಹುದು; ಜನರ ನಡುವೆ ಇದ್ದೂ ಒಂಟಿತನ ಕಾಡಬಹುದು; ಇದ್ದಕ್ಕಿಂತ ಉದ್ವೇಗ, ಒತ್ತಡ ಜಾಸ್ತಿಯಾಗಿ ಖಿನ್ನತೆಗೂ ಜಾರಿಬಿಡಬಹುದು. ಇಂತಹ ಸಂದರ್ಭಗಳನ್ನು ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ಷಣದಲ್ಲಿ ಅನುಭವಿಸುತ್ತೇವೆ. ಇದಕ್ಕೆ ಮದ್ದೇನು? ಹಲವರು ಹಲವರು ತೆರನಾದ ಪರಿಹಾರಗಳನ್ನು ಸೂಚಿಸಬಹುದು. ಕೆಲವು ಪರಿಹಾರಗಳು ಸುಲಭಕ್ಕೆ ಕೈಗೆಟುಕದೇ ಇರಬಹುದು. ದುಬಾರಿ ಇರಬಹುದು, ತಕ್ಷಣಕ್ಕೆ ಸಾಧ್ಯವಾಗದೇ ಇರಬಹುದು. ಇವುಗಳಲ್ಲೆಲ್ಲಾ ಅತ್ಯಂತ ಸುಲಭ ಮತ್ತು ತಕ್ಷಣಕ್ಕೆ ದೊರೆಯಬಹುದಾದ ಪರಿಹಾರ ಯಾವುದು? ಇದೇ ಪ್ರಶ್ನೆಯನ್ನು ಇಂದು ಎಐಗೆ ಕೇಳೋಣ. ಕೆಳಗೆ ಕೊಟ್ಟಿರುವ ಪ್ರಾಂಪ್ಟ್ ಬಳಸಿ ನಿಮ್ಮ ಒತ್ತಡ, ಉದ್ವೇಗಕ್ಕೆ ಸುಲಭ ಪರಿಹಾರ ಕಂಡುಕೊಳ್ಳಿ.
🧠 ಇಂದಿನ ಪ್ರಾಂಪ್ಟ್:
“ಇಂದು ನನಗೆ ಸ್ವಲ್ಪ [ಒತ್ತಡ] ಕಾಡುತ್ತಿದೆ.
[10] ನಿಮಿಷಗಳಲ್ಲಿ ಮಾಡಬಹುದಾದ ನನ್ನ ಮನಸ್ಸಿಗೆ ಸಮಾಧಾನ ನೀಡುವ, ದೇಹಕ್ಕೆ ಹಿತವೆನಿಸುವ ಸರಳವಾದ ಅಭ್ಯಾಸಗಳನ್ನು ಸೂಚಿಸು.
ಅಭ್ಯಾಸಗಳನ್ನು ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ಸರಳ ಭಾಷೆಯಲ್ಲಿ ವಿವರಿಸು. ಜೊತೆಗೆ, ಮಹಾನುಭಾವರು ಹೇಳಿರುವ ಕೆಲವು ಪ್ರೇರಣಾದಾಯಕ ಮಾತುಗಳಿರಲಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ಗಳಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
✨ ಅದೇ ಪ್ರಾಂಪ್ಟ್ ಅನ್ನು ನಾಲ್ಕೂ ಎಐಗಳಲ್ಲಿ ಹಾಕಿ, ಪ್ರತಿಯೊಂದೂ ಎಐ ಹೇಗೆ ವಿಭಿನ್ನವಾಗಿ ಉತ್ತರಿಸುತ್ತದೆ ಎಂಬುದನ್ನು ಗಮನಿಸಿ. ಈ ಪ್ರಾಂಪ್ಟ್ ಅನ್ನು ಸರಿಯಾಗಿ ಬಳಸುವುದು ಕಲಿತರೆ ನೀವು ಪ್ರತಿ ದಿನ ಧ್ಯಾನ ಮಾಡಲು ನಿಮ್ಮದೇ ಪರ್ಸನಲ್ ವೆಲ್ನೆಸ್ ಕೋಚ್ ಅನ್ನು ನಿಮ್ಮ ಮೊಬೈಲ್ಲ್ಲೇ ಇರಿಸಿಕೊಂಡಂತೆ. ಇದೇ ಪ್ರಾಂಪ್ಟ್ನ ವಿವರಗಳನ್ನು ಸ್ವಲ್ಪ ಬದಲಾಯಿಸಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಬೇರೆ ಬೇರೆ ಸಲಹೆಗಳನ್ನೂ ಪಡೆಯಬಹುದು. ನಿಮ್ಮ ಆರೋಗ್ಯ ಯಾನ ಇಂದೇ ಆರಂಭವಾಗಲಿ!
🔁 ಬ್ರಾಕೆಟ್ಗಳಲ್ಲಿರುವ [ ] ಭಾಗಗಳು “ಪ್ಲೇಸ್ಹೋಲ್ಡರ್ಗಳು.”
ಬ್ರಾಕೆಟ್ಗಳಿರುವ ಜಾಗದಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿವರಗಳನ್ನು ಬದಲಾಯಿಸಿ. 10 ನಿಮಿಷದ ಬದಲು 5/15/30 ನಿಮಿಷಗಳನ್ನು ಸೇರಿಸಿ. ಒತ್ತಡದ ಜಾಗದಲ್ಲಿ ಬೇಸರ/ಒಂಟಿತನ/ಜಿಗುಪ್ಸೆ/ಖಿನ್ನತೆ/ಆಘಾತ ಇತ್ಯಾದಿ ನಿಮ್ಮ ಮನಸ್ಥಿತಿಗೆ ತಕ್ಕಂತೆ ಬದಲಾಯಿಸಿ. ನಿಮಗೆ ಸೂಕ್ತವಾಗುವ ಅಭ್ಯಾಸವನ್ನು ಎಐ ನಿಮಗಾಗಿ ಸಿದ್ಧಪಡಿಸುತ್ತದೆ.
ವಾಯ್ಸ್ ಮೂಲಕ ಎಐಗೆ ನೀವು ಪ್ರಶ್ನೆಗಳನ್ನು ಕೇಳಬಹುದು. ಪ್ರಯತ್ನಿಸಿ.
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ಮನಸ್ಸಿನ ಆರೈಕೆಯೂ ನಮ್ಮ ಕೈಯ್ಯಲ್ಲೇ ಇದೆ, ಇದೂ ಕಲಿಯಬಹುದಾದ ಕೌಶಲ್ಯ”
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence



